ಸ್ವಾಮಿ ವಿವೇಕಾನಂದರ ಬಾಲ್ಯ
ಎಲ್ಲರಿಗೂ ನಮಸ್ಕಾರ,
ಸ್ವಾಮಿ ವಿವೇಕಾನಂದರು ಜನೆವರಿ.12.1863ರಂದು ಪಚ್ಚಿಮ ಬಂಗಾಳದ ಕೋಲ್ಕತಾ ದಲ್ಲಿ ಜನಿಸಿದರು.ಇವರ ತಾಯಿ ಭುವನೇಶ್ವರಿ ದೇವಿ . ಇವರ ತಂದೆ ವಿಶ್ವನಾಥ ದತ್ತ. ತಾಯಿಗೆ ಜನೆವರಿ 11.1863 ರಂದು ರಾತ್ರಿ ಆ ಸಾಕ್ಷಾತ್ ಶಿವನೇ ನಾನು ನಿನ್ನ ಹೊಟ್ಟೆಯಲ್ಲಿ ಮಗುವಾಗಿ ಜನಿಸಲಿದ್ದೇನೆ ಎಂದು ಭುವನೇಶ್ವರಿ ದೇವಿ ಅವರಿಗೆ ಕನಸು ಬಿದ್ದಿತ್ತು.
ಅದೇ ತರ ಅವರಿಗೆ ಗಂಡು ಮಗುವಿಗೆ ಜನ್ಮನೀಡಿದರೂ. ಅವರಿಗೆ ನರೆಂದ್ರ.ಎಂದು ಹೆಸರು ಇಟ್ಟರು. ನರೇಂದ್ರ ಬಾಲ್ಯದಲ್ಲಿ ತುಂಬಾ ತುಂಟರು. ಅವರು ಚಿಕ್ಕ ವಯಸ್ಸಿನಲ್ಲಿ ಧ್ಯಾನದ ಹವ್ಯಾಸ ಅಳವಡಿಸಿ ಕೊಂಡಿದ್ದರು.ಒಂದು ದಿನ ನರೇಂದ್ರರು ಒಂದು ಗಿಡಕ್ಕೆ ನೇತಾಡುತ್ತ ತಮ್ಮ ಸ್ನೇಹಿತರೊಂದಿಗೆ ಆಟವನ್ನು ಆಡುತ್ತಿರುವಾಗ. ನರೇಂದ್ರರ ತಾಯಿ ಆದಂತಹ ಭುವನೇಶ್ವರಿ ದೇವಿ ಅವರೂ ನರೇಂದ್ರನನ್ನು ಬೈದು ಅವರ ತಲೆ ಮೇಲೆ ಎರಡು ಚೊಂಬು ನೀರು ಸುರಿಯುತ್ತ ಶಿವ ಶಿವ ಎನ್ನುತ್ತಿದ್ದರು. ಆವಾಗ ನರೇಂದ್ರರು ಶಾಂತವಾಗುತ್ತಿದ್ದರು.

Comments
Post a Comment